ಚಳ್ಳಕೆರೆ ನ್ಯೂಸ್ :
ನಿರಂತರ ಯೋಜನೆಯಲ್ಲಿ ರೈತರ ಮನೆಗಳಿಗೆ ವಿದ್ಯುತ್
ಸಂಪರ್ಕ ಕೊಡಿ
ನಿರಂತರ ಜ್ಯೋತಿ ಯೋಜನೆಯಲ್ಲಿ ತೋಟದ ಮನೆಗಳಿಗೂ
ವಿದ್ಯುತ್ ಸಂಪರ್ಕವನ್ನು ಕೊಡಬೇಕು ಎಂದು ಸಂಸದ ಗೋವಿಂದ
ಕಾರಜೋಳ ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.
ಅವರು
ಚಿತ್ರದುರ್ಗ ದ ಜಿಪಂ ಸಭಾಂಗಣದಲ್ಲಿ ನೆಡೆದ ಪ್ರಗತಿ ಪರಿಶೀಲನಾ
ಸಭೆಯಲ್ಲಿ ಮಾತಾಡಿದರು.
ಸಿಂಗಲ್ ಹೌಸ್ ಇದ್ದವರಿಗೂ ನೀವು
ಸಂಪರ್ಕಕೊಡಬೇಕು. ಅವರ ಮನೆಯಲ್ಲಿ ಶಾಲೆಗೆ ಹೋಗುವ
ಮಕ್ಕಳಿರುತ್ತಾರೆ.
ನಿಮ್ಮ ಎಲ್ಲಾ ಎಇಇಗಳಿಗೆ ತಿಳಿಸಿ ಹೇಳಬೇಕು.
ನಿಮ್ಮಲ್ಲಿ ಅನುದಾನವಿಲ್ಲದಿದ್ದರೆ, ಅವರ ಹಣದಲ್ಲಿ ಹಾಕಿಕೊಳ್ಳಲು
ಅನುಮತಿ ಕೊಡಿ ಎಂದರು.