ಚಳ್ಳಕೆರೆ ನ್ಯೂಸ್ :

KSRTC ಬಸ್ ಹರಿದು ಕುರಿಗಳನ್ನು
ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸೇರಿದಂತೆ 21
ಕುರಿಗಳು ಮೃತಪಟ್ಟಿವೆ.

ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ
13 ರಲ್ಲಿ ಈರಜ್ಜನಹಟ್ಟಿ ಗೇಟ್ ಬಳಿ ಈ ಅವಘಡ
ನಡೆದಿದೆ.

ಚಳ್ಳಕೆರೆ ತಾಲೂಕು ನೆಲಗೇತನಹಟ್ಟಿ ನಿವಾಸಿ ರಾಜಪ್ಪ(30) ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ
ಕುರಿಗಾಯಿ ತಿಪ್ಪಣ್ಣ ಗಂಭೀರವಾಗಿ ಗಾಯಗೊಂಡು
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಳೆ ಇಲ್ಲದೆ ಮೇವು, ನೀರಿಗೆ ಸಮಸ್ಯೆ ಆಗಿದ್ದ ಕಾರಣಕ್ಕೆ ಚನ್ನಗಿರಿ ಭಾಗಕ್ಕೆ ನೆಲಗೇತನಹಟ್ಟಿಯಿಂದ
ಕುರಿ ಮೇಯಿಸಲು ಹೋಗಿದ್ದರು.

ಕಳೆದ ಹತ್ತು
ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ
ವಾಪಾಸು ಊರಿಗೆ ಮರಳುತಿದಾಗ ಈ ಅವಘಡ ವಾಪಾಸು ಊರಿಗೆ ಮರಳುತ್ತಿದ್ದಾಗ ಈ ಅವಘಡ
ನಡೆದಿದೆ.

ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ 21 ಕುರಿಗಳು
ಈರಜ್ಜನಹಟ್ಟಿ ರಸ್ತೆ ಬದಿಯಲ್ಲಿ ಸಾವನ ಮಡಿಲಿನಲ್ಲಿ ಬಿದ್ದಿವೆ.

ಈ ಪ್ರಕರಣ
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, KSRTC ಬಸ್
ಪೊಲೀಸರ ವಶದಲ್ಲಿದೆ.

About The Author

Namma Challakere Local News
error: Content is protected !!