ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 71 ಕೆರೆಗಳು ಬತ್ತಿಹೋಗಿ ಕುಡಿಯುವ ನೀರಿಗೆ ತಾತ್ವರ ಪಡುವಂತಾಗಿತ್ತು ಆದರೆ ಕಳೆದ ಒಂದು ವಾರದಿಂದ ಬರುವ ಮಳೆ ಅರ್ಜಲ ಮಟ್ಟ ಹೆಚ್ಚಿಸಿ ಕುಡಿಯುವ ನೀರಿಗೆ ಹಾಸರೆಯಾಗಿದೆ
ಅದರಂತೆ ಫ್ಲೋರೈಡ್ ಮುಕ್ತ ನೀರನ್ನು ಸಾರ್ವಜನಿಕರಿಗೆ ಹೊದಗಿಸುವುದು ಸರಕಾರದ ಪ್ರಮುಖ ಉದ್ದೇಶ ಆದರೆ ಕೆಲಸ ಜಂಡು ಹಿಡಿದ ಅಧಿಕಾರಿಗಳ ವೈಪಲ್ಯದಿಂದ ಯೋಜನೆಗಳು ಮೂಲೆ ಗುಂಪಾಗುತ್ತಿದೆ ಅದರಂತೆ ಶುದ್ದ ಕುಡಿಯುವ ನೀರುಕೊಡಬೇಕು ಎಂಬ ಆಶಯದೊಂದಿಗೆ ಪ್ರತಿ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಮಾಡಲಾಗಿದೆ ಆದರೆ ಅವುಗಳು ಕೆಟ್ಟು ನಿಂತರು ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಆದ್ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ಕೆಟ್ಟು ನಿಂತ ಶುದ್ದ ಕುಡಿಯುವ ನೀರಿನ ಘಟಕ ತುಕ್ಕು ಹಿಡಿದ ಯಂತ್ರಗಳು ತಾಲೂಕಿನ
ನನ್ನಿವಾಳದಲ್ಲಿ ಅಧಿಕಾರಿಗಳ ನಿರ್ಲಕ್ಷತನದಿಂದ ಲಕ್ಷ ಲಕ್ಷ ಖರ್ಚು
ಮಾಡಿ ನಿರ್ಮಾಣ ಮಾಡಿದಂತಹ ಶುದ್ಧ ಕುಡಿಯುವ ನೀರಿನ
ಘಟಕದಲ್ಲಿ ನೀರು ಸಿಗದೇ ಕೆಟ್ಟು ನಿಂತಿದ್ದು ಯಂತ್ರಗಳು ಸಹ ತುಕ್ಕು
ಹಿಡಿಯುತ್ತಿವೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಪರಿಶಿಷ್ಟ
ಪಂಗಡ ಹೊಂದಿರುವಂತಹ ಗ್ರಾಮಪಂಚಾಯಿತಿ ಎಂದರೆ ನನ್ನಿವಾಳ
ಹಿಂದುಳಿದ ಪ್ರದೇಶದಲ್ಲಿ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ
ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿತ್ತು
ಆದರೆ ಎರಡು ಶುದ್ಧ
ಕುಡಿಯುವ ನೀರಿನ ಕೆಟ್ಟು ಹೋಗಿವೆ.
ಸಂಬಂಧಿಸಿದ ಅಧಿಕಾರಿಗಳು ಹಿನ್ನಾದರೂ ದುರಸ್ತಿಗೆ ಮುಂದಾಗುವರಾ ಕಾದು ನೋಡಬೇಕಿದೆ