ಚಳ್ಳಕೆರೆ ನ್ಯೂಸ್ :
ಮಳೆಗಾಲ ಮುನ್ನೆವೇ ರಾಜಕಾಲುವೆ ದುರಸ್ಥಿಗೆ ಎಚ್ಚೆತ್ತುಕೊಳ್ಳಬೇಕಾದ ನಗರಸಭೆ ಯಾಕೋ ಮೌನ ವಹಿಸದಂತಿದೆ.
ಹೌದು ಚಳ್ಳಕೆರೆ ನಗರದಲ್ಲಿ ಪ್ರಮುಖವಾಗಿ ಮೂರರಿಂದ ನಾಲ್ಕು ರಾಜಕಾಲುವೆಗಳು ನಗರದಲ್ಲಿ ಹಾದು ಹೋಗುತ್ತವೆ ಆದರೆ ಕೆಲವು ರಾಜ ಕಾಲುವೆಗಳು ಸ್ವಚ್ಚತೆಯಿಲ್ಲದೆ ಮಳೆಗಾಲದಲ್ಲಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟು ಮಾಡಿದ್ದು ಮರೆಯುಂವತಿಲ್ಲ.
ಇನ್ನೂ ಕೊಳಚೆ ಪ್ರದೇಶದ ರಾಜಕಾಲುವೆಗಳ ಸ್ಥಿತಿ ಕೇಳತೀರದಾಗಿದೆ
ನಗರದ ವಾರ್ಡ್ ನಂಬರ್ ಎಂಟು ಮತ್ತು ಒಂಬತ್ತು ರ ರಹೀಮ್ ನಗರ ಮತ್ತು ಶ್ರೀರಾಮ ರೆಸಿಡೆನ್ಸಿ ಸಮೀಪ ರಾಜಕಾಲುವೆ ಹೂಳು ತುಂಬಿದ್ದು ಕೊಳಚೆ ನೀರು ಮುಂದೆ ಸಾಗದೆ ನಿಂತಲ್ಲಿಯೇ ನಿಂತು ಗೊಬ್ಬು ವಾಸನೆ ಬೀರುತ್ತಿದೆ.
ಇನ್ನೂ ನಗರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದರು ಕ್ಯಾರೆ ಎನ್ನದ ಗೊಡ್ಡು ಮನಸ್ಥಿತಿಗೆ ಸಾರ್ವಜನಿಕರು ಹೈರಾಣಗಿದ್ದಾರೆ.
ಇನ್ನಾದರೂ ಮಳೆಗಾಲ ಅವಾಂತರಕ್ಕೆ ಜನರನ್ನು ಸಿಲುಕಿಸದೆ ಸ್ವಚ್ಚತೆಗೆ ಮುಂದಾಗುವರಾ ಕಾದು ನೋಡಬೇಕಿದೆ