ನಾಯಕನಹಟ್ಟಿ :
ನಾಯಕನಹಟ್ಟಿ ಪಟ್ಟಣದ ಪ್ರೇರಣ ಇಂಡೇನ್ ಗ್ರಾಮೀಣ ವಿತರಕ್ ಕಚೇರಿಗೆ ಕರ್ನಾಟಕ ರಕ್ಷಣಾ ವೇಧಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಮಾ.೧೬ರಂದು ನಾಯಕನಹಟ್ಟಿ ಪಟ್ಟಣಕ್ಕೆ ಸೇರಿದ ಕನ್ನಯ್ಯನಹಟ್ಟಿ ಗ್ರಾಮದ ನೀಲಮ್ಮ ಕೆ ಪಿ ಪಾಲಣ್ಣ ಇವರ ಮನೆಯಲ್ಲಿ ಅಡುಗೆ ಮಾಡುವ ಸಮಯದಲ್ಲಿ ಪ್ರೇರಣ ಇಂಡೇನ್ ಗ್ಯಾಸ್ ಸಿಲಿಂಡರ್ ಸ್ಪೋಟಕವಾಗಿದ್ದು ಮನೆಯಲ್ಲಿ ಇದ್ದ ದವಸ ದಾನ್ಯಗಳು ಹಾಗೂ ಇತರೆ ಸಾಮ್ರಾಗಿಗಳು ಸುಮಾರು ೨ ರಿಂದ ೩ ಲಕ್ಷವರಿಗೂ ಸಾಮಾನುಗಳು ಸುಟ್ಟು ಕರಕಲಾಗಿ ಕುಟುಂಬಕ್ಕೆ ತುಂಬಾ ನಷ್ಟವಾಗಿದೆ ತಾವುಗಳು ಸಂಬAಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲನೆ ಮಾಡಿ ನಷ್ಟ ಆಗಿರುವ ಕುಟುಂಬಕ್ಕೆ ಪರಿಹಾರ ನೀಡಬೇಕಾಗಿ ಕರವೇ ಸಂಘಟನೆಕಾರರು ಮನವಿ ಮಾಡಿದರು.

ನಂತರ ಕರವೇ ಹೋಬಳಿ ಅಧ್ಯಕ್ಷರಾದ ಮುತ್ತಯ್ಯ ಮಾತಾನಾಡಿ ಅತಿ ಶ್ರೀಘ್ರದಲ್ಲಿ ಆ ಕುಟುಂಬಕ್ಕೆ ಪರಿಹಾರ ನೀಡಿ, ನಾಯಕನಹಟ್ಟಿ ಹೋಬಳಿಯಲ್ಲಿ ಪ್ರೇರಣ ಇಂಡೇನ್ ಗ್ರಾಮೀಣ ವಿತರಕರು ಹೆಚ್ಚಿನ ಶುಲ್ಕ ತಗೆದುಕೊಳ್ಳಬಾರದು ತಮ್ಮ ಕಛೇರಿಗಳಿಗೆ ಪಲಾನುಭವಿಗಳು ಅಲೆದಾಡುವ ತರ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಕರವೇ ನಗರ ಘಟಕ ಅಧ್ಯಕ್ಷರಾದ ಬೇಸಿಗೆ ಕಾಲ ಇರುವುದರಿಂದ ಸಾರ್ವಜನಿಕರಲ್ಲಿ ಗ್ಯಾಸ್ ಸಿಲಿಂಡರ್ ಬಗ್ಗೆ ಅರಿವು ಮೂಡಿಸಿ ಬೆಂಕಿ ಅವಘಡ ಆಗುವುದನ್ನು ತಪ್ಪಿಸಬೇಕು  ಎಂದರು.

ಪ್ರೇರಣ ಇಂಡೇನ್ ಗ್ರಾಮೀಣ ವಿತರಕ ಕೇಂದ್ರದ ಪ್ರತಿನಿಧಿ ಮಾತಾಡಿ ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ತಿಳಿಸಿ ನಷ್ಟ ಉಂಟಾದ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಹೋಬಳಿ ಅಧ್ಯಕ್ಷರಾದ ಮಾದಯ್ಯನಹಟ್ಟಿ ತಿಪ್ಪೇಸ್ವಾಮಿ, ಹೋಬಳಿಯ ಉಪಾಧ್ಯಕ್ಷರಾದ ಜೋಗಿಹಟ್ಟಿ ಮಂಜುನಾಥ, ನಗರ ಘಟಕದ ಉಪಾಧ್ಯಕ್ಷರಾದ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾದ ಕಾಟಯ್ಯ, ಯುವ ಘಟಕದ ಅಧ್ಯಕ್ಷರಾದ ಸುರೇಶ, ಕರವೇ ಪದಾಧಿಕಾರಿಗಳು ಇದ್ದರು.

Namma Challakere Local News
error: Content is protected !!