ಚಳ್ಳಕೆರೆ: ತಾಲೂಕಿನ ನಾಯಕನಹಟ್ಟಿ ಪಟ್ಟಣದ 5ನೇ ವಾರ್ಡ್ ನಿವಾಸಿ ತಿಪ್ಪೇಸ್ವಾಮಿ.ಎಂ ಅವರಿಗೆ ಬುಧವಾರ ಸಂಜೆ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚರಿತ್ರೆ ವಿಭಾಗದ ಸಂಶೋಧನಾ ಮಾರ್ಗದರ್ಶಕ ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಸುರೇಶ. ಬಿ ರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದ “ಏಕೀಕರಣೋತ್ತರ ಮಧ್ಯ ಕರ್ನಾಟಕದಲ್ಲಿ ದಲಿತ ಮತ್ತು ಬುಡಕಟ್ಟು ಸಮುದಾಯಗಳ ರಾಜಕಾರಣ : ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ವಿ . ಪರಮಶಿವಮೂರ್ತಿ ರವರು ಪಿಎಚ್ ಡಿ ಪದವಿ ನೀಡಿ ಗೌರವಿಸಿದರು.
ಪತ್ರಿಕೆಯೊಂದಿಗೆ ದೂರವಾಣಿಯ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡ ತಿಪ್ಪೇಸ್ವಾಮಿ ನನ್ನ ಈ ಸಾಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಕುಟುಂಬ ವರ್ಗ, ಮಾರ್ಗದರ್ಶಕರು, ವಿಭಾಗದ ಪ್ರಾಧ್ಯಾಪಕರುಗಳು, ಸ್ನೇಹಿತರು ಸಹಕಾರ ನೀಡಿದ್ದರ ಸಲುವಾಗಿ ಈ ಸಾಧನೆ ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡರು. ಎಂ. ತಿಪ್ಪೇಸ್ವಾಮಿಯವರ ಸಾಧನೆಗೆ ತಂದೆ ನಿವೃತ್ತ ಶಿಕ್ಷಕ ಮಲ್ಲಯ್ಯ.ಸಿ , ಸಹೋದರರಾದ ಬಿ.ಎಂ. ಮಂಜುನಾಥ,ಮಮತ. ಆರ್, ಶಿವಮೂರ್ತಿ.ಎಂ, ಶಾರದಮ್ಮ, ಸಹೋದರಿ ಎಂ. ನೇತ್ರಾವತಿ ಭಾವ ಚಿದಾನಂದ.ಬಿ ಸೇರಿದಂತೆ ಹಲವರು ಶುಭಹಾರೈಸಿದ್ದಾರೆ.