ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಶಾಲಾ ಮಕ್ಕಳ ಕುಂದುಕೊರತೆಗಳನ್ನು ನೀಗಿಸಲು ಸಹಕಾರ ಪ್ರೋತ್ಸಾಹ ನೀಡಬೇಕು ಎಂದು ಚಿಕ್ಕಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಾಂತಮ್ಮ ಹೇಳಿದರು
ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸುಸಜ್ಜಿತ ಶೌಚಾಲಯವನ್ನು ಉಧ್ಘಾಟಿಸಿ ಮಾತನಾಡಿದರು
ಗ್ರಾಮದ ಸ್ಥಳೀಯ ಆಡಳಿತ ಶಾಲಾ ಶಿಕ್ಷಣ ಇಲಾಖೆಯ ಆಶಯದಂತೆ ಗ್ರಾಮದ ಸ್ವಚ್ಚಭಾರತ ವಿದ್ಯಾಲಯ ಯೋಜನೆಯಡಿ ಎಲ್ಐಸಿ, ಎಚ್ಎಫ್ಎಲ್ ಮೂರುವರೆ ಲಕ್ಷ ರೂಗಳ ವೆಚ್ಚದಲ್ಲಿ ಶಾಲೆಯ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು
ಪಿಡಿಒ ಚೈತ್ರಾ ಪ್ರಾಸ್ತಾವಿಕ ಮಾತನಾಡಿ ಸಂವಿದಾನ, ಸರ್ಕಾರದ ನಿರ್ದೇಶನದಂತೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳೂ ಸೇರಿದಂತೆ ಕಾಲೇಜುಗಳಿಗೆ ಮೂಲ ಸೌಕರ್ಯ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸರವನ್ನುಂಟು ಮಾಡುತ್ತೇವೆ ಎಂದರು
ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಚಭಾರತ ಅಭಿಯಾನ, ನೈರ್ಮಲ್ಯತೆ ಕುರಿತು ಅರಿವು ಮೂಡಿಸಲಾಯಿತು ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾಂತಮ್ಮ ಸದಸ್ಯರಾದ ವಿಜಯಲಕ್ಷಿö್ಮÃ, ಇಂದಿರಾ, ಪವಿತ್ರಾ, ಪ್ರಕಾಶ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಶಾಲಾ ಸಮಿತಿಯ ಅಧ್ಯಕ್ಷ ದಿನೇಶ, ಮುಖ್ಯಶಿಕ್ಷಕ ಪಿ ಎಚ್ ದಿನೇಶ, ಶಾಲಾ ಸಮಿತಿಯ ಸದಸ್ಯರಾದ ಚಂದ್ರಪ್ಪ, ಮಧು, ಶಾಲಾ ಸಿಬ್ಬಂದಿ ಗ್ರಾಮಸ್ಥರು ಇದ್ದರು
(ಪೋಟೋ ಪಿಆರ್ಪುರ ಚಿಕ್ಕಗೊಂಡನ 10)
ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸುಸಜ್ಜಿತ ಶೌಚಾಲಯವನ್ನು ಗ್ರಾಪಂ ಅಧ್ಯಕ್ಷೆ ಮಹಾಂತಮ್ಮ ಉಧ್ಘಾಟಿಸಿದರು ಗ್ರಾಪಂ ಸದಸ್ಯರಾದ ವಿಜಯಲಕ್ಷಿö್ಮÃ, ಇಂದಿರಾ, ಪವಿತ್ರಾ, ಪ್ರಕಾಶ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಶಾಲಾ ಸಮಿತಿಯ ಅಧ್ಯಕ್ಷ ದಿನೇಶ, ಮುಖ್ಯಶಿಕ್ಷಕ ಪಿ ಎಚ್ ದಿನೇಶ, ಶಾಲಾ ಸಮಿತಿಯ ಸದಸ್ಯರಾದ ಚಂದ್ರಪ್ಪ, ಮಧು, ಶಾಲಾ ಸಿಬ್ಬಂದಿ ಗ್ರಾಮಸ್ಥರು ಇದ್ದರು