ಚಳ್ಳಕೆರೆ ನಗರಕ್ಕೆ ಶಾಸಕ ಜಮ್ಮಿರ್ ಅಹಮ್ಮದ್‌ರಿಂದ ಅಂಬೂಲೆನ್ಸ್ ಕೊಡುಗೆ
ಚಳ್ಳಕೆರೆ : ಮೊಳಕಾಲ್ಮುರು ತಾಲೂಕಿನಲ್ಲಿ ನೂತನ ಬಡಾವಣೆ ಉದ್ಘಾಟನೆಗೆ ಆಗಮಿಸುತ್ತಿರುವ ಶಾಸಕ ಜಮ್ಮಿರ್ ಅಹಮ್ಮದ್ ರವರನ್ನು ಚಳ್ಳಕೆರೆ ನಗರದ ಮುಸ್ಲಿಂ ಮುಖಂಡರು ಜಾಮೀಯ ಮಸೀದಿಗೆ ಆಹ್ವಾನಿಸಿ ಶಾಸಕ ಜಮ್ಮಿರ್ ಅಹಮ್ಮದ್ ರವರಿಗೆ ಸನ್ಮಾನಿಸಿದರು.
ನಂತರ ಚಳ್ಳಕೆರೆ ಮುಸ್ಲಿಂ ಸಮುದಾಯದಿಂದ ನಗರಕ್ಕೆ ಸಾರ್ವಜನಿಕವಾಗಿ ಅಂಬೂಲೆನ್ಸ್ ನೀಡಬೇಕು, ಸರ್ವರ ಆರೋಗ್ಯಕ್ಕೆ ಅಂಬ್ಯೂಲೆನ್ಸ್ ಅವಶ್ಯಕವಾಗಿದೆ ಆದ್ದರಿಂದ ನೀಡಬೇಕು ಎಂದು ಮನವಿ ಮಾಡಿದರು.
ಇನ್ನೂ ಶಾಸಕರು ಜನವರಿ ಮಾಸದಲ್ಲಿ ನೂತನ ಅಂಬ್ಯೂಲೆನ್ಸ್ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂಧAರ್ಭದಲ್ಲಿ ಅನ್ವರ್‌ಸಾಬ್, ಅತೀಕ್‌ರೆಹಮಾನ್, ಮುಜೀಬ್, ಅನ್ವರ್ ಮಾಸ್ಟç ಎಸ್.ಎಂ.ಬಿ.ಖಾದ್ರಿ, ಸುರಕ್ಷಾ ಪಾಲಿ ಕ್ಲಿನಿಕ್ ಮಾಲೀಕರಾದ ಪರೀದ್‌ಖಾನ್, ಶಿಕ್ಷಕರಾದ ಕಲಾಮಿ, ಕಲಿಮುಲ್ಲಾ, ಇಂಬ್ರಾನ್, ದಾವುದ್‌ಸಾಬ್, ಚಮನ್ ಸಾಬ್, ಮಹಮ್ಮದ್ ನಯಾಜ್ ಇತರ ಮುಖಂಡರು ಹಾಜರಿದ್ದರು.