ಚಳ್ಳಕೆರೆ : ಮಾನವನ ದೈಹಿಕ ಆರೋಗ್ಯ ಎಷ್ಟು‌ಮುಖ್ಯವೋ ಅದೇ ರೀತಿಯಲ್ಲಿ ‌ಮನುಷ್ಯನ ಮಾನಸೀಕ ಶರೀರವು ಕೂಡ ಅಷ್ಟೇ ಮುಖ್ಯ ಆದ್ದರಿಂದ ಮನುಷ್ಯ ಯಾವಾಗಲೂ ಲವಲವಿಕೆಯಿಂದ ಕೂಡಿರಬೇಕು ಎಂದು ಪ್ರಧಾನ‌ ಸಿವಿಲ್ ನ್ಯಾಯಾದೀಶರಾದ ಗೌಡ ಜಗದೀಶ್ ರುದ್ರೆ ಹೇಳಿದರು.

ಅವರು ನಗರದ ಪಾವಗಡ ರಸ್ತೆಯ ಸರಕಾರಿ ಐಟಿಐ ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ತಾಲೂಕು ಆರೋಗ್ಯ ಇಲಾಖೆ, ಕೈಗಾರಿಕಾ ತರಬೇತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಮಾತನಾಡಿದರು. ಮನುಷ್ಯ ಮಾನಸಿಕ ಖಾಯಿಲೆಯಿಂದ ದೂರ ಬರಬೇಕು ಅವನ ಕೆಟ್ಟ ಆಲೋಚನೆಯ ನಕಾರಾತ್ಮಕ ಅಂಶಗಳನ್ನು ಕೈ ಬಿಡಬೇಕು, ಸದಾ ತನ್ನ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೋಡಿಗಿಸಿಕೊಳ್ಳಬೇಕು ಎಂದರು.

ಇನ್ನೂ ಅಪರ ಸಿವಿಲ್ ನ್ಯಾಯಾಧೀಶರಾದ ಹೆಚ್.ಆರ್.ಹೇಮಾ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್10 ರಂದು ಆಚರಣೆ ಮಾಡುತ್ತಿದ್ದೆವೆ, ಆದರೆ ದೈಹಿಕವಾಗಿ ನಾವು ಕಿನ್ನತೆಗೆ ಒಳಗಾದರೆ ಡಾಕ್ಟರ್ ಬಳಿ‌ ಚಿಕಿತ್ಸೆ ಪಡೆಯಬಹುದು ಅದರೆ ಮಾನಸಿಕವಾಗಿ ಕಿನ್ನತೆಗೆ ಒಳಗಾದರೆ ಚಿಕಿತ್ಸೆ ತಮಗೆ ತಾವೇ ಪಡೆದುಕೊಳ್ಳಬೇಕು, ದೇಹಕ್ಕೆ ಆದ ಗಾಯಕ್ಕೆ‌ಡಾಕ್ಟರ್ ಚಿಕಿತ್ಸೆ‌ ನೀಡಿದರೆ ಮನಸಿಗೆ‌ ಆದ ಗಾಯಕ್ಕೆ‌ ಆದೇ ವ್ಯಕ್ತಿಯಿಂದ ಮಾತ್ರ ಸಾಧ್ಯ ಆದ್ದರಿಂದ ಕಿನ್ನತೆಗೆ ಒಳಗಾಗದೆ ಆರೋಗ್ಯಕರ ಜೀವನ‌ ನಡೆಸಬೇಕು ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ನಮ್ಮ ಆಲೋಚನೆಗಳನ್ನು ನಮ್ಮನು ನಾವು ಅಭಿವ್ಯಕ್ತಿ ಪಡೆಸದಿದ್ದರೆ ನಮ್ಮ‌ ಮಾನಸೀಕ ಆರೋಗ್ಯದಿಂದ ವಂಚಿತರಾಗಬಹುದು, ಆದ್ದರಿಂದ ಅಭಿವ್ಯಕ್ತಿಯ ಸ್ವತಂತ್ರದ ಮೂಲಕ ರಸ್ತೆ ಬದಿಯಲ್ಲಿ ಹುಚ್ಚನಂತೆ‌ ಇರುವ ವ್ಯಕ್ತಿಗೆ ಕಲ್ಲು ಹೊಡೆಯುವ ಬದಲು ಅವನಿಗೆ ಚಿಕಿತ್ಸೆ ಕೊಡಿಸುವ ಹಕ್ಕು ಪ್ರತಿಯೊಬ್ಬ ರದ್ದು ಕೂಡ, ಸಂವಿಧಾನ ಬದ್ದ ಕಾನೂನುಗಳನ್ನು ಪ್ರತಿಯೊಬ್ಬರು‌ ಪಾಲಿಸಬೇಕು ಎಂದರು.

ಇನ್ನೂ ಮನೋರೋಗ ತಜ್ಞರಾದ
ಡಾ.ಮಂಜುನಾಥ್ ಮಾತನಾಡಿ, ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವರು ಕೀಳಿರಿಮೆಯಿಂದ ಹೊರ ಬರಬೇಕು.
ಖಾಯಿಲೆ ಎಂದರೆ ಕಳಂಕ‌ ಎಂಬ ಮಾನಸಿಕವಾಗಿ ಕಿನ್ನತೆಗೆ ಹೊಳಗಾಗುತ್ತಾರೆ.‌ ಪ್ರಪಂಚದಲ್ಲಿ ಅಂದಾಜು13.4% ರಷ್ಟು ಮಾನಸಿಕ ಖಾಯಿಲೆಯಿಂದ ಇರುವವರು ಇದ್ದಾರೆ ಅದರಲ್ಕಿ ಹುಚ್ಚರು ಎನ್ನುವುದು‌ ನೂರಕ್ಕೆ‌ ಇಬ್ಬರು ಇರುತ್ತಾರೆ ಎಂಬುದು ದೃಡಪಟ್ಟಿದೆ, ಮಾನಸೀಕ ಪರೀಕ್ಷೆಗೆ ಒಳಪಟ್ಟವರೆಲ್ಲ‌ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬ ಅರ್ಥವಲ್ಲ‌ ಆದ್ದರಿಂದ ಮೌಡ್ಯ ಪದ್ದತಿಗಳಿಂದ ದೂರವಿರಿ ಕೇವಲ ಪೂಜೆ ಪುನಸ್ಕಾರ ದಿಂದ ನಿಮ್ಮ‌ ಖಾಯಿಲೆ ವಾಸಿಯಾಗಲು ಸಾಧ್ಯವಿಲ್ಲ, ಆದ್ದರಿಂದ ಮಾನಸೀಕ ಖಾಯಿಲೆಗೆ ಡಾಕ್ಟರ್ ಬಳಿ‌ ಚಿಕಿತ್ಸೆ ಪಡೆಯಿರಿ ಆರೋಗ್ಯ ಕರ‌ ಜೀವನ‌ ಪಡೆದುಕೊಳ್ಳಿ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿ ಮಾತನಾಡಿ, ಮನಸ್ಸು ಎಂಬುದು ಯಾರನ್ನು ನೋಡಿಲ್ಲ‌ ಆದೇ ರೀತಿ ಗಾಳಿ ಎಂಬುದು ಉಸಿರಾಟದ ಮೂಲಕ ನಮ್ಮ ಗಮನಕ್ಕೆ ಬರುತ್ತದೆ ಆದ್ದರಿಂದ ನಮ್ಮ ಅನುಭವಕ್ಕೆ‌ ಬರುವ
ಸಂತೋಷ, ಭಾವನೆ. ದುಖಃ ಈಗೇ ನಿದ್ದೆ ಬಾರದೆ ಇರುವುದು, ಆರೋಗ್ಯಕರ ಜೀವನಕ್ಕೆ‌ಹಿಂಬು ನೀಡುತ್ತಿವೆ,

ನಗು ಮುಖ ನೋಡಿ ಅವರ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ.
ಮೇಲ್ನೋಟಕ್ಕೆ ಅವರ ಭಾವನೆ‌ ಕಂಡು‌ ‌ಹಿಡಿಯಲು ಸಾಧ್ಯವಿಲ್ಲ.

ಜೀವನದಲ್ಲಿ ಅಭಿರುಚಿಗಳು ಕಳೆದು ಹೋಗಿರುವುದು ನಕರಾತ್ಮಕ ಚಿಂತನೆಗಳು ಇವೆ ಎಂದರು.

ಜಗತ್ತಿನಲ್ಲಿ ವರ್ಷಕ್ಕೆ‌ 7 ಲಕ್ಷ ಆತ್ಮಹತ್ಯೆ ಪ್ರಕರಣಗಳು ದಾಕಲಾಗುತ್ತಿವೆ.

ಸಮಾಜದ ಕಟ್ಟ ಕಡೆಯ ವ್ಯಕ್ತಿ‌‌ ಕಾನೂನಿಂದ ಹೊರಗುಳಿಯಬಾರದು.

ಅದ್ದರಿಂದ ರಸ್ತೆ ಬದಿಯಲ್ಲಿ ಅಲೆದಾಡುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೆರಿಸುವ ಜವಾಬ್ದಾರಿ ಜವಬ್ದಾರಿ‌ ಕೂಡ ನಮ್ಮ‌ಮೇಲೆ ಇದೆ ಎಂದರು.

ಇಧೇ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಬಸಣ್ಣ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಪಾಲಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಕುದಾಪುರ ತಿಪ್ಪೆಸ್ವಾಮಿ, ಅಮೃತ್ ರಾಜ್, ರಾಜು, ಸಂಜಯ್, ರಶ್ಮಿ, ಶ್ರೀಧರ್, ಪ್ರದೀಪ್ ಕುಮಾರ್, ವಕೀಲರಾದ ಶ್ರೀನಿವಾಸ್ ಇತರರು ಇದ್ದರು.

Namma Challakere Local News
error: Content is protected !!