ನಾಯಕನಹಟ್ಟಿ : ಬೀದಿ ಬದಿ ವ್ಯಾಪಾರಸ್ಥರಿಗೆ ಚೆಕ್ ವಿತರಣೆ

ನಾಯಕನಹಟ್ಟಿ:: ಪಟ್ಟಣದ ಪ್ರಗತಿ ಸಮೃದ್ಧಿ ಸೌಹಾರ್ದ ಸಹಕಾರಿ ನಿಯಮಿತ ಇದರ ವತಿಯಿಂದ ಬ್ಯಾಂಕಿನಿAದ ವ್ಯಾಪಾರಸ್ಥರಿಗೆ ಸಾಲ ರೂಪದಲ್ಲಿ ಚೆಕ್ಕುಗಳನ್ನು ವಿತರಣೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದ ಜಗಳೂರು ರಸ್ತೆಯ ಪ್ರಗತಿ ಸಮೃದ್ಧಿ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ವತಿಯಿಂದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ ಪಡೆಯುವಾಗ ಇರುವಂತಹ ವಿಶ್ವಾಸವು ಹಣ ಜಮಾ ಮಾಡುವಾಗಲೂ ಅದೇ ವಿಶ್ವಾಸವು ಇರಬೇಕು ನಾವು ಜೀವನದಲ್ಲಿ ಏನಾದರೂ ಸಾಧಿಸುವ ಛಲ ಹೊಂದಿದಾಗ ಮಾತ್ರ ಈ ಸಮಾಜ ನಮ್ಮನ್ನು ಗುರುತಿಸುತ್ತದೆ ಅದಕ್ಕಾಗಿ ಸಮಾನತೆಯ ಜಪ ಮಾಡದೆ ದೃಢ ನಿರ್ಧಾರದೊಂದಿಗೆ ಮುನ್ನುಗ್ಗಿದಾಗ ಯಶಸ್ಸು ದೊರೆಯುತ್ತದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಕೆ ಕಲ್ಲೇಶ್ ,ಹಾಗೂ ಸಹಕಾರಿಯ ಸಲಹ ಸಮಿತಿಯ ಸದಸ್ಯರಾದ ಮರಿಪಾಲಯ್ಯ, ಪಿಗ್ಮಿ ಸಂಯೋಜಕರಾದ ಆರ್ ತಿಪ್ಪೇಸ್ವಾಮಿ ,ಹಾಗೂ ನಿಕಿತಾ ,ರವರು ಭಾಗವಹಿಸಿದ್ದರು

About The Author

Namma Challakere Local News
error: Content is protected !!