ವಿರಾಟ್ ಸಮಾವೇಶಕ್ಕೆ ಚಳ್ಳಕೆರೆ ಎಸ್ಟಿ ಸಮುದಾಯ ಮುಂದು
ಚಳ್ಳಕೆರೆ : ಬಳ್ಳಾರಿಯಲ್ಲಿ ನಡೆಯಲಿರುವ ವಿರಾಟ್ ಎಸ್.ಟಿ. ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಕಾರ್ಯದರ್ಶಿಗಳು ಆದ ಕೆ.ಎಸ್.ನವೀನ್ ಭಾಗಿಯಾಗಿ ಮಾತನಾಡಿದರು.
ಪರಿಶಿಷ್ಟ ಪಂಗಡ ಸಮಾವೇಶಕ್ಕೆ ರಾಜ್ಯದ ಬುಡಕಟ್ಟು ಸಂಪ್ರದಾಯದ ಕ್ಷೇತ್ರದವಾದ ಚಳ್ಳಕೆರೆಯಿಂದ ಅತೀ ಹೆಚ್ಚಿನ ಸಂಖ್ಯೆ ಜನರು ಸೇರಬೇಕು, ಅದ್ದರಿಂದ ಪ್ರತಿಯೊಂದು ಹಳ್ಳಿಯಿಂದ ಸ್ವಯಂ ಪ್ರೇರಿತ ಜನರನ್ನು ಸಮಾವೇಶಕ್ಕೆ ಭಾಗವಹಿಸುವಂತೆ ಪ್ರೇರೆಪಿಸಬೇಕು ಅಲ್ಲಿನ ನೈಜತೆಯನ್ನು ಅರಿಯಬೇಕು ಎಂದರು.
ಚಳ್ಳಕೆರೆ ನಗರದ ಭಾರತೀಯ ಜನತಾ ಪಕ್ಷದ ಮಂಡಲದ ಅಧ್ಯಕ್ಷರು ಸೂರನಹಳ್ಳಿ ಶ್ರೀನಿವಾಸ ಮುಖಂಡರಾದ ಜಿಕೆ.ಈರಣ್ಣ, ಶಿವಮೂರ್ತಿ, ಜೆಕೆ.ತಿಪ್ಪೇಶ್, ಬಿಜೆಪಿ ನಗರ ಅಧ್ಯಕ್ಷರು ಈಶ್ವರ ನಾಯಕ, ಭಾರತ್, ಅಶೋಕ್, ಶ್ರೀನಿವಾಸ, ನಾಮನಿರ್ದೇಶನ ಸದಸ್ಯರು. ವೀರೇಶ, ಮನೋಜ್, ರಾಜು, ಇನ್ನು ಹಲವಾರು ಕಾರ್ಯಕರ್ತರು ಹಾಜರಿದ್ದರು.