ಚಳ್ಳಕೆರೆ ನ್ಯೂಸ್ :

ನಗರಸಭೆ ನಿರ್ಲಕ್ಷ್ಯ ಕ್ಕೆ‌ ಸಾರ್ವಜನಿಕರು‌ ರೋಸಿ‌ ಹೋಗಿದ್ದಾರೆ

ಹೌದು ಚಳ್ಳಕೆರೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಡೀ ನಗರ ತಗ್ಗು ಗುಂಡಿಗಳಿಂದ ಮುಚ್ಚಿದೆ.

ಇನ್ನೂ ವಾಹನ ಸಾವಾರರ ಪಾಡು ಹೇಳತೀರದು ಹಾಗಿದೆ ಸುಮಾರು ಬಾರಿ ನಗರಸಭೆ ಅಧಿಕಾರಿಗಳಿಗೇ ಮನವಿ ಮನವಿ ಮಾಡಿದರು ಕ್ಯಾರೆ ಎನ್ನುತ್ತಿಲ್ಲ

ಇನ್ನೂ ನಗರದ ಸಮಾಜ ಕಲ್ಯಾಣ ಇಲಾಖೆ, ಬಾಪೂಜಿ ಕಾಲೇಜು ರಸ್ತೆಗಳು ಹದಗೆಟ್ಟು ಹೋಗಿವೆ, ಸ್ವಚ್ಚತೆಯಂತು ಮರಿಚೀಕೆಯಾಗಿದೆ

ಇನ್ನೂ ಜನಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳಂತು ನಮಗು‌ ನಗರಕ್ಕೂ ಸಂಬಂಧ ವಿಲ್ಲವಂತೆ ಓಡಾಡುತ್ತಾರೆ.

ಇಂತಹ ಜಡ್ಡುಗಟ್ಟಿದ ನಗರಸಭೆ ದಿಕ್ಕಾರಕ್ಕೆ ಸಾರ್ವಜನಿಕರೆ ತಗ್ಗು‌ಬಿದ್ದ ರಸ್ತೆಗಳಿಗೆ ಮಣ್ಣು ಹಾಕುವುದರ ಮೂಲಕ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ‌

ಇನ್ನೂ‌ ನಗರಸಭೆ ಅಧ್ಯಕ್ಷ ಸ್ಥಾನ ಖಾಲಿಯಾಗಿ ಹಲವು ವರ್ಷಗಳೆ ಹಾಯಿತು.

ನಗರಸಭೆ ಆಡಳಿತ ಅಧಿಕಾರಿಗಳಾಗಿ ಇರುವ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ‌ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈಗೇ ಮುಂದುವರೆದರೆ ನಗರಸಭೆ ಮುಂದೆ ಹಾಗೂ ಜಿಲ್ಲಾಧಿಕಾರಿ ಕಛೇರಿ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

About The Author

Namma Challakere Local News
error: Content is protected !!