ಚಳ್ಳಕೆರೆ : ರಾಜ್ಯದಲ್ಲಿ ಮಧ್ಯೆದ ಧರ ಏರಿಕೆಯಾದ ಹಿನ್ನೆಲೆಯಲ್ಲಿ ಮಧ್ಯೆಪ್ರೀಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಇನ್ನೂ ಹಳೆ ಮಧ್ಯೆದ ಬಾಟಲಿಗಳನ್ನು ಹೊಸ ದರದ ರೂಪದಲ್ಲಿ ಮಾರಾಟ ಮಾಡುವ ಕೆಲವು ಮಧ್ಯೆ ಅಂಗಡಿಗಳು ಇದನ್ನೆ ಬಂಡವಾಳವಾನ್ನಾಗಿ ಮಾಡಿಕೊಂಡು ಹಳೆ ಸ್ಟಾಕ್‌ನ್ನು ಹೊಸ ದರಕ್ಕೆ ಮಾರಾಟ ಮಾಡುವುದು ಮಧ್ಯೆಪ್ರೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ದೊಡ್ಡುಳ್ಳಾರ್ತಿ ಗ್ರಾಮದ ಮಧ್ಯದ ಅಂಗಡಿಯೊAದರಲ್ಲಿ ಹಳೆ ಮಧ್ಯೆದ ಪೌಚ್‌ಗೆ ಹೊಸದರದಲ್ಲಿ ಮಧ್ಯೆಪ್ರೀಯರಿಗೆ ನೀಡಿರುವುದರಿಂದ ಮಧ್ಯೆಪ್ರೀಯರು ಅಬಕಾರಿ ಇಲಾಖೆ ಅಧಿಕಾರಗಳ ಮೊರೆ ಹೊಗಿದ್ದಾರೆ ಎನ್ನಲಾಗಿದೆ.
ಇನ್ನೂ ಗ್ರಾಮಾಂತರ ಪ್ರದೇಶಗಳಲಿ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಿದ ಅಬಕಾರಿ ಇಲಾಖೆ ಕಾರ್ಯಕ್ಕೆ ಹಳ್ಳಿಗಳಲ್ಲಿ ಅಕ್ರಮ ಮಧ್ಯೆ ಮಾರಾಟ ಸಂಪೂರ್ಣವಾಗಿ ನಿಲ್ಲಿಸಿದ್ದರಿಂದ ದೂರದ ಮಧ್ಯದ ಅಂಗಡಿಗಳಿಗೆ ಮಧ್ಯಪ್ರೀಯರು ಬರುವುದು ವಾಡಿಕೆಯಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಮದ್ಯದ ಅಂಗಡಿ ಮಾಲಿಕರು ನಿಗದಿತ ಬೆಲೆಗಿಂತ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಮದ್ಯಪ್ರಿಯರಿಗೆ ಹೊರೆಯಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರದಲ್ಲಿ ಗ್ರಾಹಕರಿಗೆ ಬಾರ್ ಮತ್ತು ರೇಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ಮಾಡಬೇಕು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವದು ಮದ್ಯ ಪ್ರೀಯರ ಆರೋಪವಾಗಿದೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಂದೊAದು ಅಂಗಡಿಯಲ್ಲಿ ಒಂದೊAದು ಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ಆರೋಪಗಳೂ ಸಹ ಕೇಳಿ ಬರುತ್ತವೆ. ಎಂಸಿ ವೀಕ್ಷಿ 90ಎಂಎಲ್ 1 ಪೌಚ್ ಎಂಆರ್‌ಪಿ ಬೆಲೆ 115 ರೂಪಾಯಿ ಇದೆ ಆದರೆ 140 ರೂಗಳಿಗೆ ದೊಡ್ಡಉಳ್ಳಾರ್ತಿ ಮದ್ಯದಂಗಡಿಯಲ್ಲಿ ಮಾರಾಟ ಮಾಡಿದರೆ ಇದೆ ಪೌಚ್ ಮತ್ತೊಂದು ಗ್ರಾಮೀಣ ಭಾಗದ ಮದ್ಯದಂಗಡಿಯಲ್ಲಿ 130 ರೂ, ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಹೇಳಿಕೆ :
ಸರಕಾರ ಮದ್ಯ ಏರಿಕೆ ಮಾಡಿರುವುದು ನಿಜ, ಆದರೆ ಬೆಲೆ ಏರಿಕೆಗಿಂದ ಮುಂಚೆಯೇ ಮಾರಾಟಕ್ಕೆ ಮಧ್ಯದ ಬಾಟಲಿಗಳು ಬಂದಿರುವುದರಿAದ ಸರಕಾರ ಬೆಲೆ ಏರಿಕೆ ಮಾಡಿರುವ ದಿನಾಂಕದಿAದ ಬೆಲೆ ಏರಿಕೆ ಹಣ ನೀಡಲಾಗುವುದು ಇನ್ನೂ ಬೆಲೆ ಏರಿಕೆಯ ದರ ನಿಗಧಿ ಸ್ಟಿಕರ್ ಅಂಟಿಸಬೇಕು, ಆದರೆ ಬಾರ್‌ಗಳಲ್ಲಿ ಕೊಂಚ ಬೆಲೆ ಏರಿಕೆ ಇರುತ್ತದೆ, ಎಂಆರ್‌ಪಿ ಮದ್ಯದ ಅಂಗಡಿಗಳಲ್ಲಿ ನಿಗಧಿಗಿಂತ ಹೆಚ್ಚಿಗೆ ಮಾರಾಟ ಮಾಡುವಾಗಿಲ್ಲ. — ನಾಗರಾಜ್ ಅಬಕಾರಿ ನೀರಿಕ್ಷಕರು ಚಳ್ಳಕೆರೆ

About The Author

Namma Challakere Local News
error: Content is protected !!