ಚಿತ್ರದುರ್ಗ
ಸರ್ಕಾರದ ನಿರ್ದೇಶನದಂತೆ ಮುಖ್ಯಶಿಕ್ಷಕರು ಶಾಲೆಗಳಲ್ಲಿ ಸಮಯಪಾಲನೆ, ಮಕ್ಕಳ ಕಲಿಕೆ ಹಾಗೂ ಶಾಲಾ ಪರಿಸರವನ್ನು ಆಕರ್ಷಣೀಯವಾಗಿಟ್ಟುಕೊಂಡು ವಿದ್ಯಾರ್ಥಿಗಳ ಸಮಗ್ರ ಅಭಿವೃಧ್ದಿಗೆ ಒತ್ತು ನೀಡಬೇಕು ಎಂದು ಚಿತ್ರದುರ್ಗ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಸ್ ನಾಗಭೂಷಣ ಹೇಳಿದರು
ಚಿತ್ರದುರ್ಗ ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಇಒ ಮತ್ತು ಬಿಆರ್‌ಸಿ ಹಾಗೂ ಅಕ್ಷರ ದಾಸೋಹ ಕಚೇರಿಗಳ ವತಿಯಿಂದ ಚಿತ್ರದುರ್ಗ ತಾಲೂಕು ಕಸಬಾ ಹೋಬಳಿಯ ಗ್ರಾಮೀಣ ವ್ಯಾಪ್ತಿಯ ವಿವಿಧ ಕ್ಲಸ್ಟರ್‌ಗಳ ವಿವಿಧ ಶಾಲೆಗಳ ಪ್ರಾಥಮಿಕ ಶಾಲಾ ಮುಖ್ಯಸ್ಥರಿಗೆ ಆಯೋಜಿಸಿದ್ದ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸರ್ಕಾರದ ಮುಖ್ಯ ಆಶಯ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದಾಗಿದೆ ಶಾಲಾ ಮುಖ್ಯಸ್ಥರು ನಿಯಮಿತವಾಗಿ ಎಲ್ಲಾ ಶಿಕ್ಷಕರು ಸಮಯಪಾಲನೆ ಮಾಡುವಂತೆ ಕ್ರಮವಹಿಸಿ ಮಕ್ಕಳಿಗೆ ಶುಧ್ದ ಕುಡಿವ ನೀರು, ಮೂತ್ರಾಲಯ, ಶೌಚಾಲಯ ವ್ಯವಸ್ಥೆ, ಶುಚಿ ರುಚಿಯಾದ ಅಡುಗೆ, ಎಲ್ಲಾ ಮಕ್ಕಳಿಗೂ ಸರ್ಕಾರದ ಸೌಕರ್ಯಗಳು ಸಿಗುವಂತೆ ಮೇಲುಸ್ತುವಾರಿ ವಹಿಸಬೇಕು ಎಂದರು
ಚಿತ್ರದುರ್ಗ ತಾಲೂಕಿನ ಸರ್ಕಾರಿ, ಅನುದಾನ ಸಹಿತ ಮತ್ತು ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿನ ಮುಖ್ಯಸ್ಥರು ಶಾಲೆಯ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ 1098, ಮತ್ತು ಪೊಲೀಸ್ ಸಹಾಯವಾಣಿ 112 ಬರೆಸಿ ಅಲ್ಲಿನ ಮಕ್ಕಳು ಮತ್ತು ಜನವಸತಿ ಪ್ರದೇಶದ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು
ಚಿತ್ರದುರ್ಗ ತಾಲೂಕು ಬಿಆರ್‌ಸಿ ಕಚೇರಿಯ ಕ್ಷೇತ್ರಸಮನ್ವಯಾಧಿಕಾರಿ ಈ ಸಂಪತ್‌ಕುಮಾರ ಪ್ರಾಸ್ತಾವಿಕ ಮಾತನಾಡಿ ಚಿತ್ರದುರ್ಗ ತಾಲೂಕಿನ ಎಲ್ಲಾ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರ ನೀಡಿರುವ ಶೈಕ್ಷಣಿಕ ಮಾರ್ಗದರ್ಶಿಯಲ್ಲಿರುವಂತೆ ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಕೈಗೊಳ್ಳಬೇಕು ಶಾಲಾ ಪರಿಸರವನ್ನು ಸ್ವಚ್ಚತೆಯಿಂದ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಭಾಷಾ ಕೌಶಲಗಳು ಮತ್ತು ಗಣಿತ ಇಂಗ್ಲೀಷ್ ವಿಜ್ಞಾನ ವಿಷಯಗಳಿಗೆ ಹೆಚ್ಚೆಚ್ಚು ಚಟುವಟಿಕೆಗಳನ್ನು ಆಯೋಜಿಸಿ ಎಲ್ಲಾ ಮಕ್ಕಳು ಕಲಿಯುವಂತೆ ಕ್ರಮ ವಹಿಸಬೇಕು ಎಂದರು
ಇದೇ ವೇಳೆ ಮಕ್ಕಳ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್‌ರಾಜ್ ಇಲಾಖೆ, ಪೊಲೀಸ್ ಇಲಾಖೆಯ ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಶಾಲೆಯ ಬಳಿ ಬರೆಸಿ ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ, ಸುಸಜ್ಜಿತ ಶೌಚಾಲಯ, ಶುಧ್ದಕುಡಿವ ನೀರು ಪೂರೈಕೆ ಕುರಿತು ಮುಖ್ಯಶಿಕ್ಷಕರು ಕ್ರಮ ವಹಿಸಬೇಕು ಎಂದು ಕಿವಿ ಮಾತೇಳಿದರು
ಸಂದರ್ಭದಲ್ಲಿ ಕ್ಷೇತ್ರಸಮನ್ವಯಾಧಿಕಾರಿ ಈ ಸಂಪತ್‌ಕುಮಾರ, ಇಸಿಒ ರಮೇಶರೆಡ್ಡಿ, ಸಿಆರ್‌ಪಿಗಳಾದ ವೆಂಕಟೇಶಪಾಪಣ್ಣರೆಡ್ಡಿ, ಶಿವರುದ್ರಪ್ಪ, ಮುಖ್ಯಶಿಕ್ಷಕರಾದ ಕೃಷ್ಣಪ್ಪ, ಮಲ್ಲಿಕಾರ್ಜುನ, ಲಕ್ಷಿö್ಮÃಕಾಂತರೆಡ್ಡಿ, ಹನುಮಂತರೆಡ್ಡಿ, ಓ ಚಿತ್ತಯ್ಯ, ಚಿತ್ರದುರ್ಗ ತಾಲೂಕು ಕಸಬಾ-1 ರ ಗ್ರಾಮೀಣ ಸರ್ಕಾರಿ, ಅನುದಾನ ಸಹಿತ ರಹಿತ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ಇಲಾಖೆಯ ಅನುಷ್ಟಾನಾಧಿಕಾರಿಗಳು ಇದ್ದರು
(ಪೋಟೋ ಸಿಟಿಎ ಬಿಇಒ 9 )
ಚಿತ್ರದುರ್ಗ ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಇಒ ಮತ್ತು ಬಿಆರ್‌ಸಿ ಹಾಗೂ ಅಕ್ಷರ ದಾಸೋಹ ಕಚೇರಿಗಳ ವತಿಯಿಂದ ಚಿತ್ರದುರ್ಗ ತಾಲೂಕು ಕಸಬಾ ಹೋಬಳಿಯ ಗ್ರಾಮೀಣ ವ್ಯಾಪ್ತಿಯ ಕ್ಲಸ್ಟರ್‌ಗಳ ವಿವಿಧ ಶಾಲೆಗಳ ಪ್ರಾಥಮಿಕ ಶಾಲಾ ಮುಖ್ಯಸ್ಥರಿಗೆ ಆಯೋಜಿಸಿದ್ದ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಬಿಇಒ ಎಸ್ ನಾಗಭೂಷಣ ಮಾತನಾಡಿದರು ಕ್ಷೇತ್ರಸಮನ್ವಯಾಧಿಕಾರಿ ಈ ಸಂಪತ್‌ಕುಮಾರ, ಇಸಿಒ ರಮೇಶರೆಡ್ಡಿ, ಸಿಆರ್‌ಪಿಗಳಾದ ವೆಂಕಟೇಶಪಾಪಣ್ಣರೆಡ್ಡಿ, ಶಿವರುದ್ರಪ್ಪ, ಮುಖ್ಯಶಿಕ್ಷಕರಾದ ಕೃಷ್ಣಪ್ಪ, ಮಲ್ಲಿಕಾರ್ಜುನ, ಲಕ್ಷಿö್ಮÃಕಾಂತರೆಡ್ಡಿ, ಹನುಮಂತರೆಡ್ಡಿ, ಓ ಚಿತ್ತಯ್ಯ ಇದ್ದರು